ದೀಪಾವಳಿಯ ಸಡಗರದಲ್ಲಿ ಸೌತೇಕಾಯಿ ಉಪ್ಪುಕಾರ ಹಾಕಿ ಒಂದೆರಡು ಜಾಸ್ತಿಯೇ ತಿಂದದ್ದಕ್ಕೋ ಏನೋ.... ತಲೆ ಎತ್ತಲಾರದಷ್ಟು ಭಾರವೆನಿಸಿ ರಾತ್ರಿ ಬೇಗನೇ ಮಲಗಿದವಳಿಗೆ ನಿದ್ರೆ ಬಾರದಲ್ಲ...?! ಹಾಗೇ ಉರುಳಾಡುತ್ತಿದ್ದಾಗ ಮೇಲಿನ ಕಾಟ್ ಮೇಲೆ ಮಲಗಿದ್ದ ರೂಂಮೇಟಿನ ಪಿಸುಮಾತು!! ಯಾರೊಡನೆ ಎಂದೂ ಹೇಳಬೇಕೇ?!
ಉಫ್! ತಲೆನೋವಿನ ಸಂಕಟ ತಡೆಯಲಾರದೆ ಪಕ್ಕದ ರೂಮಿನವಳಲ್ಲಿ ಟ್ಯಾಬ್ಲೆಟ್ಸ್ ತೆಗೆದುಕೊಂಡು ಬರೋಣ ಎಂದು ಹೋದರೆ ಪೂಜಾ ದಿಂಬಿಗೆ ತಲೆಯಾನಿಸಿ ಬಿಕ್ಕುತಿದ್ದಳು. ಏನೆಂದು ಕೇಳಿದಾಗ ಇನ್ನೊಬ್ಬ ಗೆಳತಿ, "ಬಾಯ್ ಫ್ರೆಂಡ್ ಬೈದ್ನಂತೆ" ಎಂದಳು. ಅಯ್ಯೋ ಪ್ರೇಮಿಗಳ ಹಣೆಬರಹವೇ ಇಷ್ಟು ಎಂದುಕೊಂಡರೆ ಅವಳ ಗೆಳೆಯನ ಫೋನ್! ಓಡಿಬಂದು ಎತ್ತಿಕೊಂಡು ಅವನಲ್ಲಿ ಅತ್ತು ಮತ್ತೆ ಪ್ರೇಮದ ಬಲೆಯಲ್ಲಿ ಬಿದ್ದಳು ಪೂಜಾ!
ಮಾತ್ರೆ ತೆಗೆದುಕೊಂಡು ಮಲಗಿದವಳು ನಿದ್ರೆ ಬಾರದಾಗ ಮೂರು ಸಾರಿ ಮೊಬೈಲ್ ನೋಡಿದೆ. ಊಹೂಂ, ನಿನ್ನದೊಂದೇ ಒಂದು ಮೆಸೇಜಿಲ್ಲ. Atleast, 'ಈಗ ಹೇಗಿದ್ದೀಯ?' ಎಂದು ಕಾಟಾಚಾರಕ್ಕೂ ಕೇಳಿಲ್ಲವಲ್ಲ ಎನಿಸಿತು. ಕಣ್ಣಂಚಿನಲ್ಲಿ ಹನಿ ಮೂಡಿದ್ದು ತಲೆನೋವಿನ ಎಫೆಕ್ಟಿಗೋ? ಅಥವಾ ನಿನ್ನ ನೆನಪಿನ ಎಫೆಕ್ಟಿಗೋ?! ಗೊತ್ತಿಲ್ಲ!
ನೀನ್ಯಾಕೆ ಇಷ್ಟೊಂದು ಸೀರಿಯಸ್ಸಾಗಿರ್ತೀಯ? ಸ್ವಲ್ಪವಾದರೂ ಫನ್ನಿ Attitude ಏಕಿಲ್ಲ? ಎನಿಸುತ್ತದೆ ಒಮ್ಮೊಮ್ಮೆ. ಮದುವೆಯಾಗಿ ಇನ್ನೂ ವರ್ಷವಾಗಿಲ್ಲ. ಓದಿನ ಉದ್ದೇಶಕ್ಕೆ ದೂರದ ಹಾಸ್ಟೆಲಿನಲ್ಲಿದ್ದರೂ ಮದುವೆಯ ಸಂದರ್ಭದಲ್ಲಿ ಕಂಡಿದ್ದ ಕನಸುಗಳಿನ್ನೂ ಹಸಿಯಾಗಿಯೇ ಇವೆ! ನಿಂಗೆ ನನಗೊಂದು ಸರ್ಪ್ರೈಸ್ ಕೊಡಬೇಕೆಂದು ಏಕೆ ಅನ್ನಿಸೋಲ್ಲ?! ನಿಜವಾಗಿಯೂ ನಿನ್ನನ್ನು ಒಂದು ಕಾಲದಲ್ಲಿ ಇಷ್ಟಪಟ್ಟು ಮದುವೆಯಾಗಿದ್ದು ನಾನೇನಾ?!!
ಹೀಗೆಲ್ಲಾ ಪದೇ ಪದೇ ಅನ್ನಿಸುವುದಿಲ್ಲ. -ನನ್ನ ರೂಂಮೇಟ್ ಬರ್ತಡೇಗೆ ಅವಳ ಗೆಳೆಯ ಗೊತ್ತಿಲ್ಲದಂತೆ ಕೇಕ್ ತರಿಸಿ, ಕೊನೆಗೊಂದು ಫಾಸ್ಟ್ರಾಕ್ ವಾಚು ಕೈಯಲ್ಲಿಟ್ಟಾಗ, ಯಾವಾಗಲೋ "ನಂಗ್ಯಾರೂ ಇಲ್ಲ; am alone" ಎಂದು ಅತ್ತಾಗ 'ನಾನಿದ್ದೇನೆ' ಎಂದು, ಬೇಜಾರಾದಾಗೆಲ್ಲಾ ನಿನ್ನಲ್ಲಿ ಬಂದಾಗ "ಚೂರು Busy ಇದೀನಿ ಕಣೇ, sorry... bye" ಎಂದಾಗ, ನಿನ್ನೂರಿಗೆ ಬರುವಾಗ ಬಸ್ಸಿನ ಸಮೀಪ ನಿನ್ನದೊಂದು 'Surprise visit' ಇರುತ್ತದೆಯೇನೋ ಎಂದು ಪ್ರತೀ ಬಾರಿಯೂ ನೋಡಿ ನೋಡಿ ನಿರಾಶಳಾಗಿ ಒಂಟಿಯಾಗಿ ನಡೆದು ಬಂದು ನಿನ್ನ ಮನೆಯ ಕದ ತಟ್ಟಿದಾಗ, 'ಗುಡ್ ನೈಟ್' ಎಂದ ಮೇಲೂ 'ನಿನ್ನ ನೆನಪಾಯಿತು ಕಣೇ, ನಿದ್ದೆ ಬರ್ತಿಲ್ಲ' ಎಂಬೊಂದು ಮೆಸೇಜು ಬರಬಹುದಾ ಎಂದು ಎದುರು ನೋಡಿದಾಗ, ನನ್ನ ಬರ್ತಡೇ ದಿನ 'ನೀನೊಂದು ಸಣ್ಣ ಉಡುಗೊರೆಯಾದ್ರೂ ಕೊಟ್ಫಿದ್ರೆ ಎಷ್ಟು ಚೆನ್ನ!' ಎಂದುಕೊಳ್ಳುತ್ತಿರ
ುವಾಗ, "ಗಿಫ್ಟ್ ಬೇಕಾ ನಿಂಗೆ? " ಎಂದು ನೀ ಕೇಳಿದ್ದಕ್ಕೆ ಬೇಕು ಎನ್ನಲು ಮನಸ್ಸೊಪ್ದೆ 'ಬೇಡ' ಎಂದು ನಸುನಕ್ಕಾಗ..... ಇಷ್ಟೇ ಕ್ಷಣಗಳಲ್ಲಿ ನೀನೊಬ್ಬ ಗಂಡನಾ ನನಗೆ? ಅನಿಸುತ್ತದೆ. ಅಷ್ಟೇ!!
ುವಾಗ, "ಗಿಫ್ಟ್ ಬೇಕಾ ನಿಂಗೆ? " ಎಂದು ನೀ ಕೇಳಿದ್ದಕ್ಕೆ ಬೇಕು ಎನ್ನಲು ಮನಸ್ಸೊಪ್ದೆ 'ಬೇಡ' ಎಂದು ನಸುನಕ್ಕಾಗ..... ಇಷ್ಟೇ ಕ್ಷಣಗಳಲ್ಲಿ ನೀನೊಬ್ಬ ಗಂಡನಾ ನನಗೆ? ಅನಿಸುತ್ತದೆ. ಅಷ್ಟೇ!!
ಆದರೂ ಪ್ರೀತಿಯಲ್ಲಿ ನೀನೊಂದು ಹೆಜ್ಜೆ ಮುಂದೆಯೇ ನನಗಿಂತ. ಇವನ್ನೆಲ್ಲಾ ಮಾಡಿದರಷ್ಟೇ ಪ್ರೀತಿಯಾ? ಕೇಳುತ್ತೀಯ ನೀನು. ' ಹೌದಲ್ಲ? ನಾನೂ ಏಕೆ ಹೀಗೆ ಮಾಯಾಜಗತ್ತಿನ ಹಿಂದೆ ಬಿದ್ದಿದ್ದೇನೆ?' ಅನಿಸುತ್ತದೆ ನನಗೆ! ಇವೆಲ್ಲಕ್ಕಿಂತಲೂ ಮೀರಿ ಆಗಲೇ 'ಜಾಸ್ತಿ ಹೊತ್ತು ಆನ್ಲೈನ್ ಲಿರಬೇಡ ಗೂಬೆ.... ತಲೆನೋವು ಜಾಸ್ತಿ ಆಗಲ್ವಾ? ಇವತ್ತಾದ್ರೂ ಯಾರದಾದ್ರೂ ತಲೆ ತಿನ್ನೋ ಬದಲು ತಣ್ಣಗೆ ಮಲಗ್ಬಾರ್ದಾ?' ಅಂತ ಮೆತ್ತಗೆ ಗದರಿದ್ದೀಯಲ್ಲಾ? ಆಗ್ಲೇ ಮತ್ತೊಮ್ಮೆ ನೀನಿಷ್ಟವಾದೆ ನನಗೆ!! ಹೊರಗೆಲ್ಲೋ ಹೋಗುವಾಗ 'ಹುಷಾರು ಕಣೇ' ಎಂದು ಅಮ್ಮ ಫೋನ್ ಮಾಡಿ ಎಚ್ಚರಿಸಿದ ತಕ್ಷಣ ನೀನೂ 'ಹುಷಾರೇ.....' ಎಂದು ಸೇಮ್ ಡೈಲಾಗ್ ಹೊಡೀತಿಯಲ್ಲಾ, ನಿನ್ನೆದುರು ಮುಖ ಊದಿಸಿಕೊಂಡರೂ, ಮತ್ತೆ ಮತ್ತೆ ನಿನ್ನಲ್ಲಿ ಪ್ರೀತಿಗೆ ಬೀಳೋ ಮನಸ್ಸಾಗತ್ತೆ ನಂಗೆ!!
ಹೇಗೋ ಗುಡುಗಿ ಆಗಿದೆ; ಜಗಳಾಡದೆ ಬಹಳ ದಿನಗಳಾಯ್ತು. ಒಮ್ಮೆ ಹುಸಿಮುನಿಸು ತೋರಿ, ಸಣ್ಣದೊಂದು ಜಗಳಾಡೋಣ ಬಾ!! ಆಮೇಲೆ ಸುರಿಯುವ ಪ್ರೀತಿ ಮಳೆಯಲ್ಲಿ ತೋಯ್ದು ತಂಪಾಗಲು ಈ ನಿನ್ನ ಭೂಮಿ ಕಾಯ್ತಿದ್ದಾಳೆ!!!
No comments:
Post a Comment