Friday, 8 May 2015

ಸರಸೀ....!!

         



ಕೊಟ್ಟುಹೋಗು ನೆನಪುಗಳ
ಪ್ರತೀ ಕ್ಷಣ ನೆನಪಾಗುವಷ್ಟು;
ನೆನಪಾದರೆ ಮೈ ಜುಮ್ಮೆನಿಸುವಷ್ಟು!
ಇನ್ಯಾವತ್ತೂ ಮರೆಯಲಾರದಷ್ಟು!!



ಜೇನ ಹೀರಬೇಕೆನಿಸಿದೆ ಗೆಳತೀ...
ಕಚ್ಚಲೇ ನಿನ್ನ ಕೆನ್ನೆ?!
ನಾಚುತಂದಳವಳು
'ಊಟ' ಸಾಲದಾಯಿತೇ ನಿನ್ನೆ?!


"ನೀನೇ ನನ್ನ ಮನದರಸಿ ಚಿನ್ನಾ"
ಎಂದವಗೆ ಬರಿಗೈಯ ತೋರಿಸಿ
ತಲೆಯ ಮೊಟಕುತ್ತ ಅಂದಳವಳು-
'ಯೋಚಿಸಿ ಮಾತನಾಡಿ ಇನ್ನೊಮ್ಮೆ
ನನ್ನ ಚಿನ್ನ ಎನ್ನುವ ಮುನ್ನ!


ಸರಸದೋಕುಳಿಯಲಿ ಮಿಂದ
ಸರಸಿಯ ಮನದಲ್ಲಿ
ಸರಸಿಜಾಕ್ಷನ ನೆನಪು!
ಮುನ್ನಾ ದಿನದಾಟಕೆ ಬಳಲಿದವಳ ಮುಖದಲ್ಲೂ
ಮತ್ತೆ ಮೂಡಿತು ಹುರುಪು!!


'ಸರಸ'ದ ಸಮಯಕ್ಕಿಂತ
ವಿರಸದಲ್ಲೇ ಸರಸಿಯ ನೆನಪು
ಅತಿಯಾಗಿ ಕಾಡುವುದು...;
ಕೈಗುಟಕದ ದ್ರಾಕ್ಷಿ ಹುಳಿಯಾದರೂ
ಸಿಗಲಾರದೆಂಬುದೇ ಶಾಶ್ವತನೋವು!!


ನಲ್ಲನ ಪ್ರಣಯದಾಟಕೆ ಸೋತವಳ
ಮನಸೆಲ್ಲಾ ಮಬ್ಬು-ಮಬ್ಬು;
ಆಕೆಯ ತುಟಿಯಂಚಿನ ಗಾಯ ಕಂಡು
ಕನ್ನಡಿಯು ಹಾರಿಸಿತು ಹುಬ್ಬು! :-P

ಸರಿರಾತ್ರಿ ಹೊತ್ತಲ್ಲಿ ಕುತ್ತಿಗೆಗಿತ್ತ
ಮುತ್ತಿಗೊಂತು ಮುತ್ತು ಸೇರುತ್ತ
ಏರಿತ್ತು ಮತ್ತು....
ಗಮ್ಮತ್ತಿನಿರುಳ ನೆನಪಿನ ಮತ್ತಲ್ಲೇ
ಸರಿದೋಯ್ತು ಮೂರು ಹೊತ್ತು!!


ಸರಸೀ.....
ಎಲ್ಲಾ ಆರೋಪ-ಪ್ರತ್ಯಾರೋಪಗಳಲ್ಲಿ ಬ್ಯುಸಿ
 ;-)
ಉಪಕಾರ ಮಾಡು-ಈ ಹವ್ಯಕ ಗ್ರೂಪ್ ಸಾರಿಸಿ; :-P
ಕಡಿಮೆಗೊಳಿಸಿ ಎಲ್ಲರ ತಲೆಬಿಸಿ :-)


ಕನಸು ಕಾಣೆಯಾಗಿದೆ
ನನ್ನ ಮನಸ್ಸು ಖಾಲಿಯೆನಿಸಿದೆ...
ನೀನಿರದ ಈ ಸಂಜೆಯಲಿ
ಈ ಹೃದಯ ಬಿಕರಿಯಾಗಿದೆ-
ಹಳೆಯ ದುಬಾರಿ ನೆನಪುಗಳ
ಸಾಲದ ಹಾವಳಿಗೆ....


(ಹವ್ಯಕ- ಫೇಸ್ಬುಕ್ ಗ್ರೂಪಿನಲ್ಲಿ 'ಸರಸೀ' ಪೋಸ್ಟ್ ಅಲ್ಲಿ ಮಜಕ್ಕೆ ಬರೆದ ಹನಿಗವನಗಳು!! :-) )

4 comments:

  1. ಇತ್ತೀಚೆಗೆ ನಿಮ್ಮ ಈ ಬ್ಲಾಗ್ ನ ಕೊಂಡಿ ಸಿಕ್ಕಿತು ..
    ಅಂದಿನಿಂದ ಪ್ರತಿದಿನವು ತಪ್ಪದೆ ಇಲ್ಲಿ ಬಂದು ಇಣುಕಿ ಹೋಗುತ್ತಿದ್ದೇನೆ ....
    ನಿಮ್ಮ ಬರಹವು ತುಂಬ ಮುದ್ದಾಗಿವೆ ..
    ಪದಗಳ ಜೋಡಣೆಯು ಅಂದವಾಗಿ ಮಾಡಿದ್ದೀರಿ ..

    "ಕೊಟ್ಟುಹೋಗು ನೆನಪುಗಳ
    ಪ್ರತೀ ಕ್ಷಣ ನೆನಪಾಗುವಷ್ಟು;
    ನೆನಪಾದರೆ ಮೈ ಜುಮ್ಮೆನಿಸುವಷ್ಟು!
    ಇನ್ಯಾವತ್ತೂ ಮರೆಯಲಾರದಷ್ಟು"

    ಇದು ನನಗೆ ಬಹುವಾಗಿ ಹಿಡಿಸಿತು ..

    ನಿಮ್ಮ ಎಲ್ಲಾ ಬ್ಲಾಗ್ ಗಳನ್ನು ವಾರಕ್ಕೆರಡು ಬಾರಿ ನೋಡುತ್ತೇನೆ.
    ಕೆಲವೊಂದಷ್ಟು ಮನಸಿಗೆ ಹಿತವೆನಿಸಿದರೆ
    ಇನ್ನು ಕೆಲವು ಎಲ್ಲ ಮರೆತು ಹಳೆಯ ನೆನಪುಗಳತ್ತ ಎಳೆಯುತ್ತವೆ,

    ನಿಮ್ಮ ಬರಹಗಳ ಪಕ್ಕಾ ಅಭಿಮಾನಿ ಆಗಿಬಿಟ್ಟಿದ್ದಿನಿ ನಾ ಇವಾಗ

    ReplyDelete
  2. This comment has been removed by the author.

    ReplyDelete
  3. sookshma vishayavanna samarthavaagi serehiDididdeera :)

    ReplyDelete