ಬ್ಲಾಗಿಗರ ಖೋಖೋ ಆಟ ಇದೇ ಹೊಸತೇನಲ್ಲ. ಅದೊಂದು ಓದುಗರಿಗೆ ಹಾಗೂ ಬ್ಲಾಗಿಗರಿಗೆ ಇಬ್ಬರಿಗೂ ಮಜಾ ಕೊಡುವ ಆಟ. ಈ ಬಾರಿ ನಾನೂ ಈ ಆಟಕ್ಕೆ ಹೊಸ ಸೇರ್ಪಡೆ. ಗುರು ಖೋ ಕೊಟ್ಟಿದ್ದಾನೆ. ನಂಗೇ ಖೋ ಕೊಟ್ಟಿದ್ದಕ್ಕೆ "ಇವಂಗೆ ಬೇರೆ ಯಾರೂ ಸಿಗಲ್ಯೇನ... ನಂಗೆ ಮೊದ್ಲೇ ಓಡಕೆ ಆಗ್ತಲ್ಲೆ :/ " ಎಂದು ಮನಸಾರೆ ಬೈದುಕೊಳ್ಳುತ್ತಾ ( :D :p ) ಈ ಕಥೆಯನ್ನು ಬರೆದಿದ್ದೇನೆ. ಇಂತಹ ಪ್ರಬುದ್ಧ ವಿಷಯವೊಂದನ್ನು ಕೈಗೆತ್ತಿಕೊಂಡಿದ್ದಕ್ಕೆ ಹಿಂಜರಿಕೆ ಹಾಗೂ ವಿಷಯಕ್ಕೆ ನ್ಯಾಯ ಒದಗಿಸಿದ್ದೀನಾ ಎನ್ನುವ ಭಯ ಇದೆ. ಯಾವುದಕ್ಕೂ ನಿಮ್ಮದೊಂದು ಅಭಿಪ್ರಾಯದ ಮುದ್ರೆ ನನ್ನನ್ನು ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. :)
ಗುರು ಬರೆದಿದ್ದು-
http://guruu725.blogspot.in/2015/11/blog-post_7.html
ಮುಂದಿನ ಸರದಿ Sharath ಅಣ್ಣಂದು(Sharath Hegde)
**************
ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯೊಂದರ ಆಪರೇಷನ್ ಥಿಯೇಟರ್ ಹೊರಗೆ ವಿವೇಕ್ ಆತಂಕದಿಂದ ಅತ್ತಲಿಂದಿತ್ತ, ಇತ್ತಲಿಂದತ್ತ ಶತಪಥ ತಿರುಗುತ್ತಿದ್ದ. ಇಡೀ ದೇಶದ ಜನರ ಮನೆ-ಮನಗಳಲ್ಲಿ ದೀಪಾವಳಿಯ ಸಡಗರ ತುಳುಕಾಡುತ್ತಿತ್ತು; ಅವನ ಮನೆಯಲ್ಲೂ! ಅವನ ಕನಸಿನ ಮಗಳು 'ಪ್ರಣತಿ' ಆ ದಿನ ಅವನ ಮತ್ತು ಆಶಾಳ ಬಾಳಿಗೆ ಬೆಳಕಾಗಿ ಬರುವವಳಿದ್ದಳು. ಫೇಸ್ಬುಕ್ಕಿನಲ್ಲಿನ ಸಾವಿರಾರು ದೀಪಾವಳಿ ವಿಷಸ್ ಸ್ಟೇಟಸ್ ಗಳ ಮಧ್ಯೆ ಇವನ 'fingers crossed' ಸ್ಟೇಟಸ್ಸಿಗೆ ಹಲವಾರು ಹಾರೈಕೆಗಳು ಬಂದಿದ್ದವು.
ವಿವೇಕ್ ಸಾಗರ ಮೂಲದ, ಈಗ ಬೆಂಗಳೂರಿನಲ್ಲಿರುವ ಒಬ್ಬ ಟೆಕ್ಕಿ. ಪತ್ನಿ ಆಶಾ ಕೂಡ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದಳು. ಫೇಸ್ಬುಕ್ಕಿನಲ್ಲೇ ಶುರುವಾದ ಇಬ್ಬರ ಗೆಳೆತನ ಪ್ರೇಮಕ್ಕೆ ತಿರುಗಿ, ಒಂದು ವರ್ಷದ ಹಿಂದಷ್ಪೇ ದಾಂಪತ್ಯಜಿವನಕ್ಕೆ ಕಾಲಿಟ್ಟಿದ್ದರು.
ಆಪರೇಷನ್ ಥಿಯೇಟರ್ ಹೊರಗೆ ಕಾಯುತ್ತಿದ್ದ ವಿವೇಕ ಬಹಳ ಚಿಂತೆಯಲ್ಲಿದ್ದ. ಮೊದಲ ಬಾರಿಯ 'ಅಪ್ಪತನ'ದ ಎಕ್ಸೈಟ್ಮೆಂಟ್ ಅನುಭವಿಸಲು ಕಾಯುತ್ತಿದ್ದ. 'ಆಶಾಳೂ ಮೊದಲು ಎಷ್ಟು ವಿರೋಧಿಸಿರೂ ಆಮೇಲೆ ಕೊನೆಗೂ ನನ್ನ ಹಠಕ್ಕೆ ಮಣಿದು ಸಂತೋಷದಿಂದಲೇ ತಾಯ್ತನದ ಸುಖವನ್ನನುಭವಿಸಲು ಸಿದ್ಧಳಾದಳಲ್ಲ....ನಮ್ಮ ಮಗುವನ್ನು ನೋಡಿ ಅವಳೂ ಖುಷಿಪಡುತ್ತಾಳೆ' ಎಂದು ಯೋಚಿಸುತ್ತಾ ಕಾತರದಿಂದ ಕಾಯುತ್ತಿದ್ದ.
ಯೋಚನಾಲಹರಿಯಲ್ಲಿದ್ದವನಿಗೆ O.T ಬಾಗಿಲು ತೆರೆದ ಸದ್ದಾಗಿ ತಲೆ ಎತ್ತಿದ. ಎದುರಿಂದ ಡಾಕ್ಟರ್ ಕೈ ಒರೆಸಿಕೊಳ್ಳುತ್ತಾ ಹೊರಬಂದರು. ತಕ್ಷಣವೇ ಡಾಕ್ಟರಲ್ಲಿಗೆ ಓಡಿದ ವಿವೇಕ್ "ಡಾಕ್ಟರ್, ಇಬ್ಬರೂ ಕ್ಷೇಮವಾಗಿದ್ದಾರಲ್ಲಾ? ಮಗು ಗಂಡೋ ಹೆಣ್ಣೋ?! ನಂಗೊತ್ತು, ನಂಗೆ ಹೆಣ್ಣುಮಗೂನೇ ಹುಟ್ಟಿರೋದು. ಅಲ್ವಾ? ಮಗು ನೋಡೋಕೆ ಹೇಗಿದೆ?" ಎಂದು ಒಂದೇಸಮನೆ ಪ್ರಶ್ನೆಗಳನ್ನು ಕೇಳತೊಡಗಿದ.
"Yeah, your wife is alright now. But...." ಎಂದ ಡಾಕ್ಟರ್ ಕಡೆ ಪ್ರಶ್ನಾರ್ಥಕವಾಗಿ ನೋಡಿದ ವಿವೇಕ್. ತಮ್ಮ ಚೇಂಬರಿನೊಳಕ್ಕೆ ಅವನನ್ನು ಕರೆದೊಯ್ದು ಡಾಕ್ಟರ್, "ನೋಡಿ ಮಿ|| ವಿವೇಕ್, ನಿಮ್ಮ ಮಗು ನೀವು ಮತ್ತು ನಿಮ್ಮ ಪತ್ನಿಯಷ್ಪೇ ಮುದ್ದಾಗಿದೆ. ಆದರೆ.... Your daughter is suffering from Tetra Amelia!" ಎಂದರು. ಅರ್ಥವಾಗದವನಂತೆ ವಿವೇಕ್ ಡಾಕ್ಟರ್ ಮುಖವನ್ನೇ ನೋಡಿದ.
"ಇದೊಂದು ಅಪರೂಪದ ಖಾಯಿಲೆ. ಮ್ಯುಟೇಟೆಡ್ ಜೀನ್ಸ್ ಗಳಿಂದ ಉಂಟಾಗುವ defect. ಕೆಲವೊಮ್ಮೆ ವಂಶಪಾರಂಪರ್ಯವೂ ಆಗಿರಬಹುದು. False abortion ಕಾರಣದಿಂದಲೂ ಈ ತರಹದ ಮಕ್ಕಳು ಹುಟ್ಟುವ ಸಾಧ್ಯತೆಯಿದೆ. Your baby is lack of all the four limbs! ನಿಮ್ಮ ಮಗು ಎಷ್ಟು ದಿನ ಬದುಕುತ್ತದೆ ಎಂಬುದನ್ನೂ ಹೇಳಲಾರೆ. In some cases these infants are short-lived. ಕೆಲವೊಮ್ಮೆ ಬಹಳ ವರ್ಷ ಬದುಕಲೂ ಬಹುದು" ಎಂದ ಡಾಕ್ಟರ್ ಮಾತಿಗೆ ಒಮ್ಮೆ ಜೀವ ಹೋದಂತಾಯ್ತು ವಿವೇಕನಿಗೆ.
ಆಘಾತದಿಂದ ಚೇತರಿಸಿಕೊಂಡು ಮಗು ಮತ್ತು ಪತ್ನಿಯನ್ನು ನೋಡಲು ಹೋದ ವಿವೇಕ್. ತೊಟ್ಟಿಲ ಪಕ್ಕದಲ್ಲೇ ಮಗುವನ್ನು ನೋಡುತ್ತಾ ಬಿಕ್ಕುತ್ತಾ ಕುಳಿತಿದ್ದಳು ಆಶಾ. ಮಗು ನೋಡಲು ಡಾಕ್ಟರ್ ಹೇಳಿದಂತೆಯೇ ಮುದ್ದಾಗಿತ್ತು. ಪುಟ್ಟ-ಪುಟ್ಟ ಕಣ್ಣುಗಳು ಅಮ್ಮನನ್ನು ಹುಡುಕುತ್ತಿತ್ತು. ಮಗುವನ್ನು ನೋಡಿದ ವಿವೇಕ್ ಬಸವಳಿದಂತೆ ಕುಸಿದು ಬಿದ್ದ. ತಕ್ಷಣ ಚೇತರಿಸಿಕೊಂಡು ಅಳುತ್ತಲೇ ಆಶಾಳಲ್ಲಿ ಹೋಗಿ ಅವಳ ತಲೆ ನೇವರಿಸುತ್ತಾ, "ಇದು ನಮ್ಮ ದುರದೃಷ್ಟವಷ್ಟೇ. ನೀನು ಬೇಜಾರಾಗಬೇಡ. ನಮ್ಮ ಪ್ರಣತಿ ಇರುವಷ್ಟು ದಿನ ಅವಳಿಗೆ ನನ್ನ-ನಿನ್ನ ಪ್ರೀತಿ ಮೊಗೆದುಕೊಡೋಣ" ಎಂದ.
ಆಶಾ ಇನ್ನೂ ಅಳುತ್ತಲೇ ಇದ್ದಳು-ತಾನೇ ತನ್ನ ಮಗುವಿನ ಭವಿಷ್ಯವನ್ನು ಹಾಳುಮಾಡಿದ ತಪ್ಪಿಗೆ! ಪ್ರೀತಿಸಿ ಮದುವೆಯಾಗಿ ಇನ್ನೂ ಇಬ್ಬರೇ ಹಾಯಾಗಿರೋಣ ಎಂದುಕೊಂಡಿದ್ದಾಗ ಅವರಿಬ್ಬರ ಮಧ್ಯೆ ಇನ್ನೊಂದು ಜೀವದ ಆಗಮನ ಅವಳಿಗಿಷ್ಟವಿರಲಿಲ್ಲ. ಆದರೆ ಬಹಳ excited ಆಗಿದ್ದ ವಿವೇಕ್ ಗೆ ತನಗಿಷ್ಟವಿಲ್ಲ ಎಂದೂ ಹೇಳುವಂತಿರಲಿಲ್ಲ. ಕೊನೆಗೆ ಗಂಡನಿಗೆ ಹೇಳದೆ ಗರ್ಭಪಾತದ ಮಾತ್ರೆ ನುಂಗಿದ್ದಳು. ಎರಡು-ಮೂರು ದಿನ ಹೊಟ್ಟೆನೋವು ಕಾಣಿಸಿದ್ದಷ್ಟೇ ಹೊರತು ಯಾವುದೇ ಪರಿಣಾಮ ಬೀರದಾದಾಗ ಮಗುವಿಗೊಂದಷ್ಟು ಬೈದು ವಿಧಿಯಿಲ್ಲದೆ ತಾಯಿಯಾಗಹೊರಟಿದ್ದಳು!
ಈಗ ವಿವೇಕ್ ಮತ್ತು ಆಶಾರ ಮನೆಯಲ್ಲಿ ನಗುವಿಲ್ಲ. ಮನೆಯೊಳಗೆ ಪ್ರತಿಧ್ವನಿಸುವುದು ಕೇವಲ ಪುಟ್ಟ ಮಗು ಪ್ರಣತಿ ಹಾಗೂ ಅವಳಮ್ಮನ ಅಳು!! ವಿವೇಕ್ ಅವರಿಬ್ಬರ ಬಾಳಿಗೆ ಆಸರೆಯಾಗಿದ್ದಾನೆ. ಹ್ಞಾಂ! ಆ ಮನೆಯಲ್ಲಿ ಎಂದೂ ಬಳಸದ ಮಗುವಿನ ಪಾದರಕ್ಷೆಗಳು ಮಾರಾಟಕ್ಕಿದೆ!!